ಮಕ್ಕಳ ಸೂಕ್ಷ ಸಮಸ್ಯೆ ಸಾರುವ ಚಿತ್ರ ಚಿಕ್ಕು - ರೇಟಿಂಗ್ : 4/5 ****
Posted date: 30 Sat, Sep 2023 09:42:34 AM
ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಅರಿಯದ ವಯಸ್ಸಿನಲ್ಲಿ ತಮಗೆ ಸಮಸ್ಯೆ ಬಂದರೆ ಹೇಗೆ ಹೇಳಿಕೊಳ್ಳವುದು ಅಂತ ತಿಳಿದಿರುವಿಲ್ಲ. ಇಂತಹ ಸೂಕ್ಷ ಸಮಸ್ಯೆಗಳನ್ನು ದೊಡ್ಡವರಾದವರು ಹೇಗೆ ಎಚ್ಚರಿಕೆಯಿಂದ ನಿಭಾಯಿಸಬೇಕು ಎಂಬುದನ್ನು ಚಿತ್ತ ಸಿನಿಮಾದಲ್ಲಿ ಚೆನ್ನಾಗಿ ಹೇಳಲಾಗಿದೆ. ಕಥೆಯಲ್ಲಿ ಈಶ್ವರನ್ (ಸಿದ್ದಾರ್ಥ್) ಸುಂದರಿ (ಸಹಸ್ರಶ್ರೀ) ತನ್ನಿಂದ ಮರದ ಹಿಂದೆ ಅಡಗಿಕೊಂಡಿರುತ್ತಾಳೆ ಎಂದು ತಿಳಿದು ಅವಳಿಗೆ ತಮಾಷೆ ಮಾಡಿ ಹಿಡಿಯಲು ಮೊಬೈಲ್ ಗೇಮ್ ಬಳಸುತ್ತಾನೆ. ಮುಂದೆ ಶಾಲಾ ಮಕ್ಕಳನ್ನು ಅಪಹರಿಸಿ ನಿಂದಿಸುವ ಶಿಶುಕಾಮಿ, ಮಗುವನ್ನು ಅಪಹರಿಸುವ ಮೊದಲು ಆಕೆಯ ಮನಸ್ಸನ್ನು ಗೆಲ್ಲಲು ಇಂತಹುದೆ ಮೊಬೈಲ್ ತಂತ್ರ ಬಳಸುತ್ತಾನೆ. ಮುಂದೇನು ಎನ್ನುವುದು ಕುತೂಹಲಗಳ ಮೂಲಕ ಚಿತ್ರಮಂದಿರದಲ್ಲಿ ನೋಡುವುದೇ ಚೆಂದ ಅನಿಸುತ್ತದೆ.

ನಿರ್ದೇಶಕ ಎಸ್.ಯು.ಅರಣ್‌ಕುಮಾರ್ ಸನ್ನಿವೇಶಗಳನ್ನು ಹೂ ಪೋಣಿಸಿದಂತೆ ಸೃಷ್ಟಿಸಿರುವುದು ಪರದೆ ಮೇಲೆ ಅದ್ಬುತವಾಗಿ ಮೂಡಿಬಂದಿದೆ. ನಾಯಕ ಸಿದ್ದಾರ್ಥ್ ನಟಿಸುವುದರ ಜತೆಗೆ ನಿರ್ಮಾಣ ಮಾಡಿರುವುದು ವಿಶೇಷ. ಉಳಿದಂತೆ ನಿಮಿಷಸಜಾಯನ್, ಅಂಜಲಿನಾಯರ್, ಸಹಸ್ರಶ್ರೀ ಮುಂತಾದವರು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮೆಲೋಡಿ ಹಾಡುಗಳಿಗೆ ವಿಶಾಲ್‌ಚಂದ್ರಶೇಖರ್ ಸಂಗೀತ ಸಂಯೋಜಿಸಿದ್ದಾರೆ. ಬಾಲಾಜಿ ಸುಬ್ರಮಣ್ಯಂ ಛಾಯಾಗ್ರಹಣ ಕಣ್ಣಿಗೆ ತಂಪು ಕೊಡುತ್ತದೆ. ಸುರೇಶ್.ಎ.ಪ್ರಸಾದ್ ಸಂಕಲನ ಇದೆಲ್ಲಾಕ್ಕೂ ಪೂರಕವಾಗಿದೆ. ಒಟ್ಟಾರೆ ಪೈಸಾ ವಸೂಲ್ ಸಿನಿಮಾವಾಗಿದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed